Share this book with your friends

Trishanku Kannada / ತ್ರಿಶಂಕು

Author Name: Mohan Thite | Format: Paperback | Genre : Literature & Fiction | Other Details

ತ್ರಿಶಂಕು, ಒಂದು ಆತ್ಮಚರಿತ್ರೆ ಕಾದಂಬರಿ.  ಇದು ಭಾರತೀಯ ವಲಸೆಗಾರನ ಸ್ವಯಂ-ಶೋಧನೆ ಮತ್ತು ಸ್ವಯಂ-ಅಸ್ಮಿತೆಯ ಶ್ರೀಮಂತ ಚಿತ್ರಣವಾಗಿದೆ. ಒಂದು ಮರವನ್ನು ಬೇರುಸಹಿತ, ಬೇರೆ ಮಣ್ಣಿನಲ್ಲಿ ಮರು ನೆಟ್ಟರೆ, ಅದು ಬೆಳೆಯುತ್ತದೆಯೇ ಅಥವಾ ಬಾಡಿಹೋಗುತ್ತದೆಯೇ ಎಂದು ಏನು ನಿರ್ಧರಿಸುತ್ತದೆ? ಮತ್ತು ಮರ ಹೊಸ ಮಣ್ಣಿನೊಂದಿಗೆ ತನ್ನ ಸಂಬಂಧವನ್ನು ಹೇಗೆ  ಮರುಹೊಂದಾಣಿಕೆ ಮಾಡಿಕೊಳ್ಳುತ್ತದೆ?  

ಎರಡು ಲೋಕಗಳ ನಡುವೆ ಸಿಕ್ಕಿಹಾಕಿಕೊಂಡ ಪೌರಾಣಿಕ ತ್ರಿಶಂಕು ಪಾತ್ರವು, ವಲಸಿಗರು ನಿಜವಾಗಿಯೂ ಯಶಸ್ವಿಯಾಗಿದ್ದಾರೆಯೇ ಅಥವಾ ಕಳೆದುಹೋಗಿದ್ದಾರೆಯೇ ಎಂಬ ಸಂದಿಗ್ಧತೆಯನ್ನು ಸೂಕ್ತವಾಗಿ ಪ್ರತಿಬಿಂಬಿಸುತ್ತದೆ. ಪುಸ್ತಕದಲ್ಲಿನ ಅಧ್ಯಾಯಗಳು ಮೊದಲ ತಲೆಮಾರಿನ ವಲಸಿಗ ಕುಟುಂಬವು ಜಾಗತಿಕ ಮತ್ತು ಬಹು-ಸಾಂಸ್ಕೃತಿಕ ಹಳ್ಳಿಯಲ್ಲಿ ಅನುಭವಿಸುವ ಕಚ್ಚಾ ಭಾವನೆಗಳ ಏರಿಳಿತಗಳನ್ನು ಸೆರೆಹಿಡಿಯುತ್ತದೆ. ತ್ರಿಶಂಕು ಶಾಂತ ಮತ್ತು ಅಸ್ತವ್ಯಸ್ತವಾದ, ದಣಿದ ಮತ್ತು ಉಲ್ಲಾಸದ ಪ್ರಯಾಣವನ್ನು; ಜೀವನದಲ್ಲಿ ಮುಖ್ಯವಾದ ಸಂಬಂಧಗಳು ಮತ್ತು ಜನರನ್ನು ಪ್ರತಿಬಿಂಬಿಸುತ್ತದೆ.

ತ್ರಿಶಂಕು, ಪಾಶ್ಚಾತ್ಯ ದೇಶಗಳನ್ನು ತಮ್ಮ ಮನೆ ಎಂದು ಕರೆಯುವ ಲಕ್ಷಾಂತರ ಅನಿವಾಸಿ ಭಾರತೀಯರ ಕಥೆಯಾಗಿದೆ. ತಾವು ಬಿಟ್ಟು ಬಂದ ಭಾರತಕ್ಕೆ ಅಂಟಿಕೊಂಡಿರುವ ಇವರ ನೆನಪು ಮತ್ತು ಮತ್ತು ಭಾವನೆಗಳನ್ನು ತೊಡೆದು ಹಾಕಿ, ಭಾರತದ  ಬದಲಾವಣೆಗೆ ಹೊಂದಿಕೊಳ್ಳಲು ಒದ್ದಾಡುತ್ತಾರೆ. ಚರಿತ್ರೆಯ ಮುಷ್ಟಿಯಿಂದ  ಮುಕ್ತವಾದ ನವ ಭಾರತದ ಹೊಸ ಆತ್ಮವಿಶ್ವಾಸ ಅವರ ಆತ್ಮಾವಲೋಕನವನ್ನು ಉತ್ಪ್ರೇಕ್ಷಿಸುತ್ತದೆ. ಅವರು ತಮ್ಮ ಜನ್ಮಭೂಮಿ ಮತ್ತು ಕರ್ಮಭೂಮಿ ಎರಡರಲ್ಲೂ ಅಪರಿಚಿತರಾಗಿ ತ್ರಿಶಂಕು ಸ್ಥಿತಿಯಲ್ಲಿ ಇರುತ್ತಾರೆ.

ಮತ್ತೆ ನೆಡಲಾದ ಮರವು ಹೊಸ ಭೂಮಿಯಲ್ಲಿ ಆಳವಾದ ಬೇರುಗಳನ್ನು ರೂಪಿಸಿದೆಯೇ? ತನ್ನ ಹೊಸ ಪರಿಸರದಲ್ಲಿ ತಲೆಮಾರುಗಳು  ಅಭಿವೃದ್ಧಿ ಹೊಂದಲು ಸಾಕಷ್ಟು ಹೊಂದಾಣಿಕೆ ಮಾಡಿಕೊಂಡಿದೆಯೇ?

ಚಾ ಕುಡಿಯುತ್ತ  ಕಂಡುಹಿಡಿಯಿರಿ!

Read More...
Paperback
Paperback 399

Inclusive of all taxes

Delivery

Item is available at

Enter pincode for exact delivery dates

Also Available On

ಮೋಹನ್ ಥಿಟೆ

ಮೋಹನ್ ಭಾರತೀಯ ಮೂಲದ ಆಸ್ಟ್ರೇಲಿಯಾದವರು. ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅವರು ಬ್ರಿಸ್ಬೇನ್‌ನಲ್ಲಿ ನೆಲೆಸಿದ್ದಾರೆ ಆದರೆ ಸ್ವಭಾವದಲ್ಲಿ ಅಲೆಮಾರಿ.  ಅನುಭವದ ಕಲಿಕೆ ಮತ್ತು ಸ್ವಯಂ-ಶೋಧನೆಯ ಅನ್ವೇಷಣೆಯಲ್ಲಿ ಜಾಗತಿಕ ಸಂಚಾರಿ.

ತಮ್ಮ ಜೀವನದುದ್ದಕ್ಕೂ ಮಾನವ ಸಂಪನ್ಮೂಲ ವೃತ್ತಿಪರರು ಮತ್ತು ಶೈಕ್ಷಣಿಕರಾಗಿರುವ ಇವರು ಅನೇಕ ಶೈಕ್ಷಣಿಕ ಪ್ರಕಟಣೆಗಳನ್ನು ಹೊಂದಿದ್ದಾರೆ.  ಇದು ಮೋಹನ್ ಅವರ ಚೊಚ್ಚಲ ಕಾದಂಬರಿ.  

Read More...

Achievements

+2 more
View All