Share this book with your friends

Vijayagana / ವಿಜಯಗಾನ

Author Name: Dr. Shalini V.L. | Format: Paperback | Genre : Literature & Fiction | Other Details

ವಿಜಯಗಾನ- ಕನಸುಗಳ ಬೆನ್ನೇರಿ ಜೋಡಿಜೀವಗಳ ಪಯಣ. ಪ್ರತಿಷ್ಠೆಯ ಹಠಕ್ಕೆ ಆಶಾಗೋಪುರ ಕಣ್ಣೆದುರೇ ಕಳಚಿ ಬಲವಂತದ ತುತ್ತು ಬಾಯಿ ಸೇರಲು ಬಿಸಿತುಪ್ಪ ಉಗುಳಲಾಗದೇ ನುಂಗಲಾಗದೇ ನೀರಸ ಬದುಕು ಸಾಗುತ್ತಿರಲು, ತಾ ಕಂಡ ಕನಸುಗಳು ಮತ್ತೊಬ್ಬರ ಕಣ್ಣಲ್ಲಿ ನರ್ತಿಸುವುದ ಕಂಡು ಆ ಕನಸಿಗೆ ಗೆಜ್ಜೆ ಕಟ್ಟಿ ಕುಣಿಸುವ ಹೊಸ್ತಿಲಲ್ಲಿ ಅಡಗಿ ಕೂತಿದ್ದ ಆಶಾಹಕ್ಕಿಯ ರೆಕ್ಕೆಪುಕ್ಕ ಬಲಿತು ಹಾರಲು ಕಾದು ಕುಳಿತಿರುವ ಕುರುಹು ಸಿಗಲು ಸಮಾನ ಮನಸ್ಕ ಕೈಗಳು ಹಕ್ಕಿ ಹಾರಿಸಲು ಒಟ್ಟಾಗುವ ದಿಟ್ಟ ಮನಸ್ಸುಗಳ ಹೋರಾಟದ ಯಾನ, ಆ ಹಾದಿಯಲ್ಲಿ ಬರುವ ಒಲವು ಮುನಿಸು ಅನುಮಾನ ಸಂಬಂಧಗಳ ಭಾವ ಮಿಶ್ರಣ , ಕನಸುಗಳೊಂದಿಗೆ ಕನಸು ಬೆರೆತು ಬದುಕು ಸೊಗಸಾಗುವ ಬದುಕಿನ ಸಿಹಿಹೂರಣ.

Read More...
Paperback
Paperback 199

Inclusive of all taxes

Delivery

Item is available at

Enter pincode for exact delivery dates

Also Available On

ಡಾ. ಶಾಲಿನಿ ವಿ.ಎಲ್.

ಡಾ. ಶಾಲಿನಿ ವಿ.ಎಲ್‌. ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಲೇಖಕಿ. ಪ್ರಸ್ತುತ ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಗರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಕಥೆ ಕವನ ಲೇಖನಗಳ ಪ್ರಕಟಿಸುತ್ತಾ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ “ಸಹನಾ- ಆದರ್ಶಗಳೊಂದಿಗೆ ಜೀವನ”, “ಅನರ್ಘ್ಯರತ್ನ” ಎಂಬ ಎರಡು ಕಾದಂಬರಿಗಳನ್ನು ಪ್ರಕಟಿಸಿರುವ ಇವರು ಕನ್ನಡ ಕಾದಂಬರಿ ಲೋಕದಲ್ಲಿ ಯುವಕಾದಂಬರಿಗಾರ್ತಿಯಾಗಿ ಭರವಸೆ ಮೂಡಿಸಿದ್ದಾರೆ. ‘ವಿಜಯಗಾನ’ ಕಾದಂಬರಿ ಪ್ರಕಟಿಸುವ ಮೂಲಕ ತಮ್ಮ ಕಾದಂಬರಿ ಪ್ರಯಾಣ ಮುಂದುವರೆಸಿ ಸಾಹಿತ್ಯ ಸೇವೆ ಮುಂದುವರೆಸಿದ್ದಾರೆ.

Read More...

Achievements

+9 more
View All