ನವೀನತೆ ಪ್ರತಿ ವ್ಯಕ್ತಿಯಲ್ಲೂ ಅಡಗಿದೆ. ಆದರೆ ಆ ನವೀನ ಶಕ್ತಿಯು ಯಥಾವತ್ತಾಗಿ ಬೆಳೆಸದೆ ಹೋದರೆ, ಅದು ಪೂರ್ಣವಾಗಿ ವ್ಯಕ್ತವಾಗದು. ಇದನ್ನು ಬೆಳೆಸಲು ದೃಢ ನಿಟ್ಟಿನ ಪ್ರಯತ್ನಗಳು ಅಗತ್ಯವಿರುತ್ತವೆ. ಈ ಮನೋಭಾವವನ್ನು ಸಕಾಲದಲ್ಲಿ ಮತ್ತು ಶಿಸ್ತುಪೂರ್ವಕವಾಗಿ ಬೆಳೆಸದೆ ಹೋದರೆ, ವ್ಯಕ್ತಿಯು ತನ್ನ ಶಕ್ತಿಗಳ ಮೇಲೆ ನಂಬಿಕೆಯನ್ನು ಕಳೆದುಕೊಳ್ಳಬಹುದು ಅಥವಾ ಅನಾವಶ್ಯಕವಾಗಿ ಹೋರಾಡಬೇಕಾದ ಪರಿಸ್ಥಿತಿಯನ್ನೆದುರಿಸಬೇಕಾಗಬಹುದು.
ಈ ತತ್ವಾಧಾರಿತ ಪುಸ್ತಕವನ್ನು ನವೀನ್ ಲಕ್ಕುರ್ ರಚಿಸಿದ್ದು, ಪ್ರತಿಯೊಬ್ಬರಲ್ಲೂ ಇದ್ದು ಮರೆತುಹೋದ ಆಂತರಿಕ ಶಕ್ತಿಯನ್ನು ಪುನರ್ಜೀವಿತಗೊಳಿಸುವ ಉದ್ದೇಶದಿಂದ, ಅವರ ವಿಶಿಷ್ಟ ಹನ್ನೆರಡು ಜೋಡಿತತ್ವಗಳನ್ನು ಆಧರಿಸಿ. ಒಟ್ಟಾಗಿ ಒಂದು ಗುರಿಯ ಕಡೆಗೆ ಸಾಗುತ್ತಿರುವ ತಂಡದ ಸದಸ್ಯರು ತಮ್ಮ ಪೂರ್ಣ ಶಕ್ತಿಯನ್ನು ಅರಿತುಕೊಳ್ಳಲು, ತಮ್ಮ ಪ್ರಯಾಣವನ್ನು ಆನಂದಪೂರಿತವಾಗಿಸಿ, ಇಂಟ್ರಪ್ರಿನಿಯರಶಿಪ್ ಅಥವಾ ಎಂಟ್ರಪ್ರಿನಿಯರಶಿಪ್ ಗುರಿ ತಲುಪುವ ಮಾರ್ಗವನ್ನು ಸುಲಭಗೊಳಿಸಲು ಈ ಪುಸ್ತಕ ಸಹಾಯಕವಾಗಲಿದೆ. ಇದನ್ನು ವಿಶೇಷವಾಗಿ ಮಹತ್ವಾಕಾಂಕ್ಷೆಯುಳ್ಳ ಯುವಮನಸ್ಸುಗಳಿಗೆ ಉದ್ದೇಶಿಸಲಾಗಿದ್ದು, ಅವರು ಎದುರಿಸಬಹುದಾದ ಅನೇಕ ಅಡೆತಡೆಯನ್ನು ತಪ್ಪಿಸಿಕೊಳ್ಳಲು ನೆರವಾಗುವುದು.
ಪ್ರತಿಯೊಬ್ಬರಿಗೂ ಸಮಯವು ಸೀಮಿತವಾಗಿದ್ದು, ಇತ್ತೀಚೆಗೆ ಗಮನ ವಹಿಸುವ ಶಕ್ತಿಯೂ ಕಡಿಮೆಯಾಗಿದೆ. ಆದರೂ ಮಾನವ ಇತಿಹಾಸದ ಆರಂಭದಿಂದಲೂ ಸಮಯ, ಗಮನ ಮತ್ತು ಕಲ್ಪನೆಗೆ ಸೆಳೆಯುವ ಶಕ್ತಿಯುಳ್ಳ ಸಂವಹನ ವ್ಯವಸ್ಥೆ ಏನೆಂದರೆ ಅದು ಕಥಾ ಹೇಳುವ ಕಲೆ. ಸಾಮಾನ್ಯ ವ್ಯಾಪಾರ ಪುಸ್ತಕ ಶೈಲಿಯಲ್ಲಿ ಶಕ್ತಿಶಾಲಿಯಾದ ಈ ತತ್ವಗಳನ್ನು ಒದಗಿಸುವ ಬದಲು, ಲೇಖಕರು ಸುಲಭವಾಗಿ ಓದಬಹುದಾದ ಕಥಾ ರೂಪದಲ್ಲಿ ಆವಿಷ್ಕರಿಸಿದ್ದಾರೆ. ಎರಡು ಆನೆಗಳು — ಆಪಿ ಮತ್ತು ಪ್ರಾಪಿ — ತಮ್ಮ ಅನುಭವದ ಕಣ್ಣಿನಿಂದ ಈ ತತ್ವಗಳನ್ನು ಹೇಳುವ ರೋಚಕ ಕಥೆಗಳ ಮೂಲಕ ನಿರೂಪಿಸುತ್ತವೆ. ಇವರಿಗೆ ಲಕ್ಕಿ ಎಂಬ ವ್ಯಕ್ತಿಯೊಂದಿಗಿನ ಅಕಸ್ಮಾತ್ ಭೇಟಿಯಿಂದ ಈ ಹನ್ನೆರಡು ಜೋಡಿತತ್ವಗಳ ಕುರಿತಂತೆ ನಡವಳಿಕೆಯ ಸರಣಿ ಆರಂಭವಾಗುತ್ತದೆ.
ಈ ಹನ್ನೆರಡು ಜೋಡಿತತ್ವಗಳಲ್ಲಿ ಪ್ರತಿ ಒಂದೂ ವ್ಯಕ್ತಿಯು ತನ್ನ People, Purpose & Performance ಅನ್ನು ಪುನರ್ಜೀವಿತಗೊಳಿಸಲು ಸ್ಪೂರ್ತಿದಾಯಕವಾಗಿರಬಹುದು.
ಈ "ಅವಳಿ ಜವಳಿ ಸೂತ್ರಗಳು" ಪುಸ್ತಕವನ್ನು ಕನ್ನಡಕ್ಕೆ ಕವಿತಾ ಪರಮೇಶ್ ಅವರು ಅನುವಾದಿಸಿದ್ದಾರೆ.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners