You cannot edit this Postr after publishing. Are you sure you want to Publish?
Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಅನಿಸಿಕೆಗಳು - ೦೧
ಡಾ ವಿಶ್ವನಾಥ ಪ ಬಳಿಗಾರರವರ ಒಡಹುಟ್ಟಿದವರು ಕವನ ಸಂಕಲನ ಉತ್ತಮ
ಸಂದೇಶಗಳನ್ನು ಕೊಡುವ ಕವನ ಸಂಕಲನವಾಗಿದೆ ಪ್ರತಿ ಕವನವೂ
ಮೂರು ಸಾಲಿನಿಂದ ರಚಿತವಾಗಿ ಓದಿದ ತಕ್ಷಣ ಖುಷಿ ಕೊಡುವ
ಕವನಗಳಾಗಿವೆ. ಅವರಲ್ಲಿರುವ ಯೋಚನೆಗಳು ಕವನರೂಪದಲ್ಲಿ ಹೊರಹೊಮ್ಮಿವೆ.
ಪ್ರತಿ ಕವನವೂ ಹಸಿಯ ಗೋಡೆಯ ಮೇಲೆ ಹಳ್ಳನಿಟ್ಟಂತೆ ಉತ್ತಮ ಸಂದೇಶಗಳನ್ನು ಕೊಟ್ಟಿವೆ. ಅವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಇನ್ನೂಹೆಚ್ಚಿನ ಸೇವೆ ಸಿಗಲಿ ಎಂದು
ಹಾರೈಸುತ್ತೇನೆ.
ಡಾ ಜಯಲಕ್ಷ್ಮಿ ಜಿ ನರಗುಂದ
ಪ್ರಾಧ್ಯಾಪಕರು, ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ
ಹುಬ್ಬಳ್ಳಿ - ೫೮೦೦೩೧
೦೭ ನವೆಂಬರ್, ೨೦೨೩
ಅನಿಸಿಕೆಗಳು - ೦೨
ಡಾ ವಿಶ್ವನಾಥ ಪ ಬಳಿಗಾರ ಅವರು ಬರೆದ ಅಮೂಲ್ಯವಾದ ಮುತ್ತುಗಳಂತೆ ಬರೆಯಲಾದ ಕವನಗಳು ಪ್ರಸ್ತುತ ಸಮಾಜಕ್ಕೆ ಲಯಬದ್ಧ ಮತ್ತು ಅರ್ಥಪೂರ್ಣವಾಗಿವೆ. ಅವರು ತಮ್ಮ ಕವಿತೆಗಳ ಮೂಲಕ ಸಮಾಜದ ಎಲ್ಲಾ ಯುವಕ-ಯುವತಿಯರಿಗೆ ಮನಸ್ಸಿಗೆ ಮುದ ನೀಡುವ ವಿಚಾರಗಳೊಂದಿಗೆ ಸಾಕಷ್ಟು ಮಾಹಿತಿಯನ್ನು ತಲುಪಿಸುತ್ತಾರೆ. ಡಾ ವಿಶ್ವನಾಥ ಪ ಬಳಿಗಾರವರು ಮತ್ತು ಕುಟುಂಬಕ್ಕೆ ದೀರ್ಘ ಮತ್ತು ಸಮೃದ್ಧ ಜೀವನಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಡಾ ವೀಣಾ ಚೌಡಾಪುರ
ಪ್ರಾಧ್ಯಾಪಕರು, ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ
ಹುಬ್ಬಳ್ಳಿ - ೫೮೦೦೩೧
೭ ನವೆಂಬರ್ ೨೦೨೩
ಅನಿಸಿಕೆಗಳು ೦೩
ಡಾ ವಿಶ್ವನಾಥ ಪ ಬಳಿಗಾರರವರ ಒಡಹುಟ್ಟಿದವರು ಕವನ ಸಂಕಲನ
ಅದ್ಭುತ ಸಂದೇಶಗಳನ್ನು ಕೊಡುವ ಕವನ ಸಂಕಲನವಾಗಿದೆ.
ಪ್ರತಿ ಕವನವೂ ಮೂರು ಸಾಲಿನಿಂದ ರಚಿತವಾಗಿ ಒಂದು ಕವನ ಓದಿದ ನಂತರ
ಮತ್ತೊಂದು ಕವನ ಓದುವಂತೆ ಪ್ರೇರೇಪಿಸಿತ್ತವೆ. ಓದಿದ ತಕ್ಷಣ ಖುಷಿ ಕೊಡುವ
ಕವನಗಳಾಗಿವೆ. ಅವರಲ್ಲಿರುವ ಅದ್ಭುತ ಪ್ರತಿಭೆ ಕವನರೂಪದಲ್ಲಿ ಹೊರಹೊಮ್ಮಿವೆ.
ಪ್ರತಿ ಕವನವೂ ಮೂರೇ ಸಾಲಿನಲ್ಲಿ ದೊಡ್ಡ ಸಂದೇಶ ನೀಡಿವೆ. ಅವರಿಂದ ಕನ್ನಡ ಸಾರಸ್ವತ
ಲೋಕಕ್ಕೆ ಇನ್ನೂಹೆಚ್ಚಿನ ಸೇವೆ ಸಿಗಲಿ ಎಂದು ಹಾರೈಸುತ್ತೇನೆ.
ಡಾ ಮನೋಹರ ಮಾಡಗಿ
ಪ್ರಾಧ್ಯಾಪಕರು, ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ
ಹುಬ್ಬಳ್ಳಿ - ೫೮೦೦೩೧
೦೭ ನವೆಂಬರ್, ೨೦೨೩
ಡಾ ವಿಶ್ವನಾಥ ಪರಮೇಶ್ವರಪ್ಪ ಬಳಿಗಾರ
ಡಾ ವಿಶ್ವನಾಥ ಪರಮೇಶ್ವರಪ್ಪ ಬಳಿಗಾರ ಅವರು ಗದಗ ಜಿಲ್ಲೆಯ ಶಿಗ್ಲಿ ಗ್ರಾಮದಲ್ಲಿ ೧೯೬೬ ರಲ್ಲಿ ಪ್ರಸಿದ್ಧ ಬಳಿಗಾರ ಮನೆತನದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಶಿಗ್ಲಿಯಲ್ಲಿಯೇ ಒಂದರಿಂದ ಹತ್ತನೇ ತರಗತಿಯವರೆಗೆ ಓದಿದರು.
ಬಿ ಇ ಪದವಿಯನ್ನು, ಕೆ ಎಲ್ ಇ ಇಂಜನಿಯರಿಂಗ್ ಕಾಲೇಜ್ ಬೆಳಗಾವಿಯಲ್ಲಿ ಹಾಗೂ ಎಂ ಟೆಕ್ ಪದವಿಯನ್ನು ಮೈಸೂರಿನ ಎಸ ಜೆ ಸಿ ಇ ಇಂಜನಿಯರಿಂಗ್ ಕಾಲೇಜಿನಲ್ಲಿ ೧೯೯೫ ರಲ್ಲಿ ಪಡೆದರು.
೧೯೯೯ ರಿಂದ ೨೦೦೩ ರ ರ ವರೆಗೆ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನಲ್ಲಿ ಪಿ ಎಚ್ ಡಿ ಪದವಿಯನ್ನು ಮಾಡಿದರು
೩೨ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಹಾಗೂ ಏಳು ವರ್ಷ ಇಂಜನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಾಗೂ ಜರ್ನಲ್ ಗಳಲ್ಲಿ ನಲವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.ಇವರು ಒಳ್ಳೆಯ ಕ್ರೀಡಾಪಟುವೂ ಕೂಡಾ, ಓಟ ಈಜು ಚದುರಂಗ ಕಬಡ್ಡಿ ಆಟಗಳಲ್ಲಿ ಶಾಲೆ ಮತ್ತು ಕಾಲೇಜುಗಳಲ್ಲಿ ಅನೇಕ ಬಂಗಾರದ ಪದಕಗಳನ್ನು ಪಡೆದಿದ್ದಾರೆ
The items in your Cart will be deleted, click ok to proceed.