ಇಂದು ವಿದ್ಯಾಭ್ಯಾಸವು ಮಹತ್ತರ ಮಜಲನ್ನು ಕಂಡಿದ್ದರೂ ಸಹ ಸ್ವಂತ ಸ್ತರದ ಸೃಜನತೆಯು ಮಾತ್ರಾ ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಕಾರಣ ಇಂದು ಬಹುಶಃ ಮಾನವನು ಪ್ರಕೃತಿಯನ್ನು ಪ್ರೀತಿಸುವ ಕೊರೆತೆ, ಸ್ವಾಧ್ಯಾಯದ ಕೊರತೆ, ಕೇವಲ ವಿತ್ತದ ಧ್ಯಾನ, ಸ್ವದೇಶೀ ಸಂಸ್ಕೃತಿಯ ಕೊರತೆ, ಅಧ್ಯಾಸವನ್ನು ಪ್ರೀತಿಸುವಿಕೆ, ಸ್ವೇಚ್ಛತೆಗೂ ಸ್ವಾತಂತ್ರ್ಯಕ್ಕೂ ವ್ಯತ್ಯಾಸವನ್ನು ಅರಿಯದ ಮನಸ್ಸು, ಹೀಗೆ ಇತ್ಯಾದಿ ಅಂಶಗಳೆ ಇವುಗಳಿಗೆಲ್ಲ ಕಾರಣವಾಗಿರಬಹುದಾಗಿದೆ. ಇದಕ್ಕೆ ಉತ್ತರ ರೂಪದಲ್ಲಿ ಈ ಕೃತಿಯನ್ನು ರಚಿಸಲಾಗಿದೆ.