Share this book with your friends

Chiguru / ಚಿಗುರು

Author Name: Dr. Ravi H | Format: Paperback | Genre : Educational & Professional | Other Details

ಅವಲೋಕನ, ಅಧ್ಯಯನ, ಆಲೋಚನೆ ಮತ್ತು ಅನುಭವಗಳೇ ಅಭಿವ್ಯಕ್ತಿಯ ಸಮಗ್ರ ನೆಲೆ. ಬೋಧನೆಯು ಒಂದು ಪರಿಣಾಮಕಾರಿ ಅಭಿವ್ಯಕ್ತಿ. ಅದೊಂದು ಏಕಮುಖ ಅಭಿವ್ಯಕ್ತಿಯಾಗಿರದೆ ಪರಿಣಾಮ, ಪ್ರಮಾಣ ಪ್ರತಿಕ್ರಿಯೆಗಳೆಂಬ ಆಶಯದ ಸಂವಹನವಾಗಿದೆ. ಆ ದೃಷ್ಟಿಯಿಂದ ಬೋಧನೆ ಒಂದು ಪರಿಣಾಮಕಾರಿ ಸಂವಹನ ಕ್ರಿಯೆ ಎಂದು ಹೇಳುವಲ್ಲಿ ಸಂಶಯವಿಲ್ಲ. ಈ ಕ್ರಿಯೆ ಬಹುತ್ವಗೊಂಡು ವಿವಿಧ ಚಟುವಟಿಕೆ, ತಾರ್ಕಿಕ ಚಿಂತನೆ, ವೈವಿ ದ್ಯಮಯ ದೃಷ್ಟಿಕೋನವನ್ನು ಪಡೆದು ಸೃಜನಶಿಲತೆಯನ್ನು ಪ್ರವಹಿಸುತ್ತದೆ. ಬೋಧನೆಗೆ ಪ್ರಭಾವಿ ಪ್ರೇರೇಪಣೆಯಂದರೆ ವಿದ್ಯಾರ್ಥಿಗಳ ಇಂದಿನ ಕಲಿಕೆ ನಾಳಿನ ಬದುಕಾಗಿಸುವುದಾಗಿದೆ. ಆ ಪ್ರಭಾವಿ ಪ್ರೇರಣೆಯೇ ಮತ್ತೆ ಬೋಧನಾ ವೃತ್ತಿ ಸಂವರ್ಧನೆಗೆ ಪುನಃ ಪ್ರೇರಣೆ. ಹಾಗಾಗಿ ಬೋಧನೆ ಮತ್ತು ಕಲಿಕೆಗಳು ಸ್ವಯಂಶಕ್ತಿ ಸಂವರ್ಧನ ಪ್ರಕ್ರಿಯೆಗಳು. ಇದಕ್ಕೆ ಬೇಕಾದ ನಿರಂತರ ತಯಾರಿ ಮತ್ತು ಸಿಗುವ ಅವಕಾಶಗಳ ಪ್ರತಿಫಲವೇ ಈ ಚಿಗುರು ಸಂಚಿಕೆ.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳ ಭವಿಷ್ಯದ ಭವ್ಯತೆಯನ್ನು ನಿರೀಕ್ಷಿಸುವ ಬರವಸೆಗೆ ಬೆಳಕನ್ನು ನೀಡುವಲ್ಲಿ ತನ್ನ ನಿರಂತರ ಪರಿಶ್ರಮವನ್ನು ಫಲಶೃತಿಗೊಳಿಸುವ ಪ್ರಯತ್ನದಲ್ಲಿಯೇ ತೊಡಗಿರುತ್ತದೆ. ಈ ಹಿನ್ನಲೆಯಲ್ಲಿ ಮಹಾವಿದ್ಯಾಲಯದ ಭಾಷಾಸಂಘ ವಾರ್ಷಿಕವಾಗಿ ವೈವಿದ್ಯಮಯವಾದ ಚಟುವಟಿಕೆಗಳನ್ನು, ಕಾರ್ಯಕ್ರಮಗಳನ್ನು ಮತ್ತು ಜ್ಞಾನದ ವೃದ್ಧಿಗೆ ಬೇಕಾದ ಕೌಶಲಗಳ ಹೂರಣವನ್ನು ಸದಾ ಕ್ರಿಯಾತ್ಮಕಗೊಳಿಸಿ ವಿದ್ಯಾರ್ಥಿಗಳನ್ನು ಜಾಗೃತರನ್ನಾಗಿಸುವ ಕೈಂಕರ್ಯವನ್ನೀಯುತ್ತಿದೆ ಎಂಬುದು ಅತಿಶೆಯೋಕ್ತಿಯಾಗಲಾರದು. ಪ್ರಶಿಕ್ಷಣಾರ್ಥಿಗಳು ತಮ್ಮ ಬೋಧನೆಯ ಕೌಶಲಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ತಮ್ಮಲ್ಲಿರುವ ಸೃಜನಶೀಲತೆಯನ್ನು ಹಲವಾರು ಮಜಲುಗಳ ಮೂಲಕ ತರೆದಿಡುವ ಪ್ರಯತ್ನ ಬಹುಶಃ ಅವರ ಲೇಖನಗಳ ಮೂಲಕ ಪ್ರತಿಪಲನವನ್ನುಂಟು ಮಾಡುತ್ತಿವೆ. ಸಾಹಿತ್ಯಿಕ, ವೈಜ್ಞಾನಿಕ, ತಾರ್ಕಿಕ, ನಾಡು-ನುಡಿಯ ಆಶೋತ್ತರಗಳು ಮತ್ತು ವಿಭಿನ್ನ ಆಶಯದ ಮಾಹಿತಿಗಳನ್ನು ಹೊತ್ತಿರುವ ಚಿಗುರು ಸಂಚಿಕೆಯು ಓದುಗರಿಗೆ ಒಂದು ಹೊಸ ಆಲೋಚನೆಯ ಕಡೆಗೆ ಕೊಂಡೊಯ್ಯುವುದ0ತೂ ಸತ್ಯ.

Read More...
Paperback
Paperback 225

Inclusive of all taxes

Delivery

Item is available at

Enter pincode for exact delivery dates

Also Available On

ಡಾ. ರವಿ ಹೆಚ್

ಡಾ. ರವಿ ಹೆಚ್. ಸಹಾಯಕ ಪ್ರಧ್ಯಾಪಕರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಶಿಕಾರಿಪುರ. ಇವರು  ೧೭-೦೮-೨೦೦೯ ರಿಂದ ೨೮-೧೨-೨೦೧೦ರ ವರೆಗೆ ಜುಬೇದಾ ಮಹಿಳಾ ಡಿ.ಇಡಿ ಕಾಲೇಜು, ಶಿಕಾರಿಪುರದಲ್ಲಿ ಪ್ರಾಚಾರ್ಯರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿ ನಂತರ ೨೯-೧೨-೨೦೧೦ರಿಂದ ಕರ್ನಾಟಕದ ಪ್ರತಿಷ್ಟಿತ ಬಿ.ಇಡಿ ಕಾಲೇಜುಗಳಲ್ಲಿ ಒಂದಾದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನಿರಂತರ ಸೇವೆಯನ್ನು ಸಲ್ಲಿಸುತ್ತಾ ಬೋಧನೆಯೊಂದಿಗೆ ವಿವಿಧ ಶೈಕ್ಷಣಿಕ ಸಮ್ಮೇಳನ, ಕಾರ್ಯಾಗಾರಗಳಲ್ಲಿ ಭಾಗವಿಸುತ್ತಾ, ಹಲವಾರು ಸಂಶೋಧನಾ ಮತ್ತು ಸೈದ್ದಾಂತಿಕ ಲೇಖನಗಳನ್ನು ಮಂಡಿಸಿದ್ದಲ್ಲದೇ ಅನೇಕ ಲೇಖನಗಳನ್ನು ಪ್ರತಿಷ್ಟಿತ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ ಹೊಂದಿದ ಇವರು ಸೃಜನಾತ್ಮಕವಾಗಿ ಏನಾದರೂ ಕಾರ್ಯನಿರ್ವಹಿಸಬೇಕೆಂದು ಆಲೋಚಿಸಿ ಈಗಾಗಲೇ “ಪಂಪ ಪ್ರಶಸ್ತಿ ಪುರಸ್ಕೃತರು”, "ಸಿರಿಗನ್ನಡ ಭಾಷಾಂಶ ಸಂಚಿ", "ಶಿವಮೊಗ್ಗ ಜಿಲ್ಲಾ ಪ್ರವಾಸಿ ತಾಣಗಳು" ಮತ್ತು "Educational Perspectives"  ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ.

ಪ್ರಸ್ತುತ ಈ ಸಂಚಿಕೆಯು ಪ್ರಾಧ್ಯಾಪಕರು ಮತ್ತು ಪ್ರಶಿಕ್ಷಣಾರ್ಥಿಗಳು ಬರೆದಿರುವ ಲೇಖನ ಮತ್ತು ಪ್ರಬಂಧಗಳ ಸಂಪಾದನೆಯಾಗಿದೆ.

Read More...

Achievements

+5 more
View All