Share this book with your friends

Indian Muslims, The Way Forward / ಭಾರತೀಯ ಮುಸ್ಲಿಮರು, ಮುಂದಿನ ದಾರಿ Why Muslims Remain Backward in All Spheres and What Should Be Done About it

Author Name: K. RAHMAN KHAN | Format: Hardcover | Genre : Educational & Professional | Other Details

ಭಾರತೀಯ ಮುಸ್ಲಿಂರ ನಡೆ : ಉಜ್ವಲ ಭವಿಷ್ಯದ ಕಡೆಯ ಪುಸ್ತಕವು ಮುಸ್ಲಿಂರಿಗೆ ಸಂಬಧಿಸಿದ ಹಲವಾರು ಸಮಸ್ಯೆಗಳ ಮೇಲೆ ಪ್ರಭಾವ ಬೀರುತ್ತದೆ. ಅವುಗಳೆಂದರೆ:

• ಭಾರತೀಯ ಮುಸ್ಲಿಂರು ಒಟ್ಟಾರೆಯಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಏಕೆ ಹಿಂದುಳಿದಿದ್ದಾರೆ? ಇದನ್ನು ಪರಿಹರಿಸಲು ಏನು ಮಾಡಬಹುದು?
• ಭಾರತೀಯ ಮುಸಲ್ಮಾನರ ಇಂದಿನ ಸ್ಥಿತಿಗತಿಗಳಿಗೆ ಮುಸ್ಲಿಂ ಧಾರ್ಮಿಕ ಮತ್ತು ರಾಜಕೀಯ ನಾಯಕರು ಎಷ್ಟು ಹೊಣೆಗಾರರು?
• ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಕ್ಕೆ ಭಾರತೀಯ ಮುಸ್ಲಿಂರು ಹೇಗೆ ಸಂಬಧಿಸುತ್ತಾರೆ?
• ಭಾರತದ ಮುಸ್ಲಿಂರು ದೇಶದ ಇತರ ಸಮುದಾಯಗಳ ಜನರ ಅಭಿಮಾನವನ್ನು ಹೇಗೆ ಗಳಿಸಬಹುದು? ಅಂತರ ಸಮುದಾಯದ ಸಾಮರಸ್ಯವನ್ನು ಉತ್ತೇಜಿಸಲು ಅವರು ಮಾಡಬಹುದಾದ ಕೆಲವು ಪ್ರಾಯೋಗಿಕ ಕಾರ್ಯಗಳು ಯಾವುವು?

ಈ ಪುಸ್ತಕವು ಪ್ರಸ್ತುತ ಸಂದರ್ಭದಲ್ಲಿ ಭಾರತದ ಮುಸಲ್ಮಾನರ ಮುಂದಿನ ಉಜ್ವಲ ಭವಿಷ್ಯದ ಕಡೆಗೆ ಎಂಬುದರ ಬಗ್ಗೆ ಹೇಳುತ್ತದೆ. ಅವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸುವಾಗ ಇಡೀ ದೇಶದ ಮತ್ತು ವಿಶಾಲ ಸಮಾಜದ ಸಾಮಾನ್ಯ ಒಳಿತಿಗಾಗಿಯೂ ಕೊಡುಗೆ ನೀಡುವಂತೆ ಈ ಪುಸ್ತಕ ಅವರಿಗೆ ಮನವಿ ಮಾಡುತ್ತದೆ. ದೇಶದ ಇತರ ಸಮುದಾಯಗಳಂತೆ, ಭಾರತದ ಮುಸ್ಲಿಂರಿಗೆ, ಈ ದೇಶವು ಅವರ ತಾಯ್ನಾಡು, ಅದುದರಿಂದ ಶಾಂತಿಯುತ ಸಹಬಾಳ್ವೆಯ ಕಲೆಯನ್ನು ಅಭ್ಯಾಸ ಮಾಡಬೇಕೆಂಬುದೇ ಪುಸ್ತಕದ ಮುಖ್ಯ ಅಂಶವಾಗಿದೆ. “ದೇವರು, ಅವರೆಲ್ಲರಿಗೂ ಇಲ್ಲಿ ಕೂಡಿ ಬಾಳಲು ನಿಗದಿಪಡಿಸಿದ್ದಾರೆ” ಎಂದು ಪ್ರತಿಯೊಬ್ಬರು ಹೇಳಬಹುದು ಎಂದು ಲೇಖಕರು ವಿವರಿಸಿದ್ದಾರೆ. 

Read More...
Hardcover
Hardcover 475

Inclusive of all taxes

Delivery

Item is available at

Enter pincode for exact delivery dates

Also Available On

ಕೆ. ರಹಮಾನ್ ಖಾನ್

ಕೆ. ರೆಹಮಾನ್ ಖಾನ್ ರವರು ಕರ್ನಾಟಕದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯಲ್ಲಿ ೧೯೩೯ರಲ್ಲಿ ಜನಿಸಿದರು. ಚಾರ್ಟರ್ಡ್ ಅಕೌಂಟೆAಟ್ ಆಗಿ ಅರ್ಹತೆಗೊಂಡ ಅವರು ೧೯೭೮ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು ಮತ್ತು ೧೯೮೨-೮೪ ರವರೆಗೆ ಅದರ ಅಧ್ಯಕ್ಷರಾಗಿ ಗದ್ದುಗೆ ಏರಿದರು. ಅವರು ೧೯೯೪ ಏಪ್ರಿಲ್ ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು ಮತ್ತು ನಂತರ ೨೦೦೦ರ ಮೇ ಮಾಹೆಯಲ್ಲಿ ಎರಡನೇ ಅವಧಿಗೆ ಮರು ನೇಮಕಗೊಂಡರು. ಅವರು ಮೇ ೨೦೦೦  ರಿಂದ ಜುಲೈ ೨೦೦೪ ರವರೆಗೆ ಭಾರತೀಯ ಸಂಸತ್ತಿನ ಮೇಲ್ಮನೆಯಲ್ಲಿ ಭಾರತೀಯ ರಾಷ್ಟಿçಯ ಕಾಂಗ್ರೆಸ್‌ನ ಉಪನಾಯಕರಾಗಿ ಸೇವೆ ಸಲ್ಲಿಸಿದರು. ತದನಂತರ ಅವರು ಕೇಂದ್ರ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವರಾಗಿ ಸೇರ್ಪಡೆಗೊಂಡರು ಮತ್ತು ನಂತರ ರಾಜ್ಯಸಭೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು (೨೦೦೪-೨೦೦೬). ಅವರು ೨೦೦೬ರಲ್ಲಿ ಮೂರನೇ ಅವಧಿಗೆ ರಾಜ್ಯಸಭೆಗೆ ಮರು ಆಯ್ಕೆಯಾದರು ಮತ್ತು ರಾಜ್ಯಸಭೆಯ ಉಪಾಧ್ಯಕ್ಷರಾಗಿಯೂ ಮರು ಆಯ್ಕೆಯಾದರು ಹಾಗೂ ೨೦೧೨ ಏಪ್ರಿಲ್ ನಲ್ಲಿ ನಾಲ್ಕನೇ ಅವಧಿಗೆ ರಾಜ್ಯಸಭೆಗೆ ಮರು ಆಯ್ಕೆಯಾದರು. 

ಅವರು ಅಕ್ಟೋಬರ್ ೨೮, ೨೦೧೨ ರಂದು ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಮೇ ೨೫, ೨೦೧೪ ರವರೆಗೆ ಆ ಕಚೇರಿಯಲ್ಲಿದ್ದರು. ಸಾರ್ವಜನಿಕರೊಳಗಿನ ಜೀವನದಲ್ಲಿ ಹಲವು ವರ್ಷಗಳ ಅನುಭವದೊಂದಿಗೆ  ಕೆ.ರೆಹಮಾನ್ ಖಾನ್ ನಿರ್ಗತಿಕರ/ಬಡ ಜನರ ಸ್ನೇಹಿತ ಎಂದು ಹೆಸರುವಾಸಿಯಾಗಿದ್ದಾರೆ. ಅವರು ತಮ್ಮನ್ನು ಅನೇಕ ಸಾಮಾಜಿಕವಾಗಿರುವ ಹಲವಾರು ಉಪಕ್ರಮಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಮತ್ತು ಹಲವಾರು ಸಾಮಾಜಿಕ ಯೋಜನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅವರ ಆತ್ಮಚರಿತ್ರೆ ‘ಮೈ ಮೆಮೆಯಿರ್ಸ್ - ವಿಶ್ವಾಸ, ಯಶಸ್ಸು, ಕನಸು ಮತ್ತು ಪೂರ್ವ ನಿರ್ಧರಿತ ಘಟನೆಗಳು’ ಎಂಬ ಶೀರ್ಷಿಕೆಯ ಆಂಗ್ಲ ಆವೃತ್ತಿಯ ಪುಸ್ತಕವನ್ನು ೨೦೧೯ರಲ್ಲಿ ನೋಷನ್ ಪ್ರೆಸ್ ಪ್ರಕಟಿಸಿದೆ. 

Read More...

Achievements

+11 more
View All