Share this book with your friends

Shivasharane Akkamahadeviya Akaaraadi Vachanaglu / ಶಿವಶರಣೆ ಅಕ್ಕಮಹಾದೇವಿಯ ಅ ಕಾರಾದಿ ವಚನಗಳು ವಚನಗಳ ಸಂಗ್ರಹ

Author Name: Dr. Ravi H | Format: Paperback | Genre : Educational & Professional | Other Details

ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನೈಜ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕಳಾಗಿ ಜಗತ್ತಿಗೆ ಗುರುತಿಸಿಕೊಂಡ ಅಕ್ಕಮಹಾದೇವಿ ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿ ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವನನ್ನು (ಮಲ್ಲಿಕಾರ್ಜುನ)ನನ್ನು ಪತಿಯಾಗಿ ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ ಅಲ್ಲದೆ ತನ್ನ ಅನುಭಾವವನ್ನು ವಚನಗಳ ಮೂಲಕ ಹೇಳುತ್ತಾ ವಚನ ಸಾಹಿತ್ಯದ ಪ್ರಮುಖರಲ್ಲಿ ಒಬ್ಬಳಾಗಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. 

ಅಕ್ಕಮಹಾದೇವಿ ಮೂಲತಃ ಆಧ್ಯಾತ್ಮ ಸಾಧಕರು. ತಮ್ಮ ಇಷ್ಟದೈವವಾದ ಚೆನ್ನಮಲ್ಲಿಕಾರ್ಜುನನನ್ನು ಸೇರುವುದೇ ಅವರ ಬಾಳಿನ ಪರಮ ಗುರಿಯಾಗಿತ್ತು. ಅದಕ್ಕಾಗಿಯೇ ಅವರು ಬಾಲ್ಯದಿಂದಲೂ ಹಂಬಲಿಸಿದರು. ಅವರ ಆ ಹಂಬಲಿಕೆಯ ಪ್ರತಿಬಿಂಬವೇ ಅವರ ಕವನ ರೂಪದ ವಚನಗಳು.

Read More...
Paperback
Paperback 210

Inclusive of all taxes

Delivery

Item is available at

Enter pincode for exact delivery dates

ಡಾ. ರವಿ ಹೆಚ್

ಡಾ. ರವಿ ಹೆಚ್. ಸಹಾಯಕ ಪ್ರಾಧ್ಯಾಪಕರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಶಿಕಾರಿಪುರ. ಇವರು  ೧೭-೦೮-೨೦೦೯ ರಿಂದ ೨೮-೧೨-೨೦೧೦ರ ವರೆಗೆ ಜುಬೇದಾ ಮಹಿಳಾ ಡಿ.ಇಡಿ ಕಾಲೇಜು, ಶಿಕಾರಿಪುರದಲ್ಲಿ ಪ್ರಾಚಾರ್ಯರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿ ನಂತರ ೨೯-೧೨-೨೦೧೦ರಿಂದ ಕರ್ನಾಟಕದ ಪ್ರತಿಷ್ಟಿತ ಬಿ.ಇಡಿ ಕಾಲೇಜುಗಳಲ್ಲಿ ಒಂದಾದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನಿರಂತರ ಸೇವೆಯನ್ನು ಸಲ್ಲಿಸುತ್ತಾ ಬೋಧನೆಯೊಂದಿಗೆ ವಿವಿಧ ಶೈಕ್ಷಣಿಕ ಸಮ್ಮೇಳನ, ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾ, ಹಲವಾರು ಸಂಶೋಧನಾ ಮತ್ತು ಸೈದ್ದಾಂತಿಕ ಲೇಖನಗಳನ್ನು ಮಂಡಿಸಿದ್ದಲ್ಲದೇ ಅನೇಕ ಲೇಖನಗಳನ್ನು ಪ್ರತಿಷ್ಟಿತ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ ಹೊಂದಿದ ಇವರು ಸೃಜನಾತ್ಮಕವಾಗಿ ಏನಾದರೂ ಕಾರ್ಯನಿರ್ವಹಿಸಬೇಕೆಂದು ಆಲೋಚಿಸಿ ಈಗಾಗಲೇ “ಪಂಪ ಪ್ರಶಸ್ತಿ ಪುರಸ್ಕೃತರು”, "ಸಿರಿಗನ್ನಡ ಭಾಷಾಂಶ ಸಂಚಿ", "ಶಿವಮೊಗ್ಗ ಜಿಲ್ಲಾ ಪ್ರವಾಸಿ ತಾಣಗಳು", "Educational Perspectives" ಮತ್ತು “ಚಿಗುರು”  ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ ಶ್ರೀಯುತರು ಪ್ರಸ್ತುತ ೧೨ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿಯವರ ವಚನಗಳನ್ನು ಸಂಗ್ರಹಿಸಿ ಈ ಪುಸ್ತಕದ ಮೂಲಕ ಸಹೃದಯರಿಗೆ ಓದಿ ತಿಳಿಯಲು ಅವಕಾಶ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.

Read More...

Achievements

+5 more
View All