Share this book with your friends

Sirigannada Bhashamsha Sanchi / ಸಿರಿಗನ್ನಡ ಭಾಷಾಂಶ ಸಂಚಿ ಕಿರಿಯರಿಂದ ಹಿರಿಯರಿಗಾಗಿ

Author Name: Dr Ravi H | Format: Paperback | Genre : Educational & Professional | Other Details

ಕನ್ನಡ ಭಾಷೆಯಲ್ಲಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಮೂರು ಬಗೆಗಳಿವೆ. ಕನ್ನಡ ಮತ್ತು ಇತರ ಭಾಷೆಗಳ ಸಂಬಂಧ ಗಾಢವಾಗಿದೆ. ಹಾಗಾಗಿ ಅನಾದಿ ಕಾಲದಿಂದಲೂ ಅನೇಕ ವ್ಯಾಕರಣಕಾರರು ಸಂಸ್ಕೃತಾದಿಯಾದ ಭಾಷಾ ವ್ಯಾಕರಣಕಾರರನ್ನು ಅನುಸರಿಸಿರುವುದು ಗೋಚರಿಸುತ್ತದೆ.  ವ್ಯಾಕರಣಾದಿಯಾಗಿ ಭಾಷಾಂಶಗಳು ಶುದ್ಧವಾಗಿ ನಾತನಾಡಲು, ಬರೆಯಲು ಸೂಕ್ತವಾದ ನಿಯಮಗಳನ್ನು ನಿರೂಪಿಸುತ್ತವೆ. ಅವುಗಳ ಸಹಾಯವಿಲ್ಲದೇ ಯಾವ ಭಾಷೆಯನ್ನು ಶುದ್ಧವಾಗಿ ಮಾತನಾಡಲೂ ಮತ್ತು ಬರೆಯಲು ಕಷ್ಟವಾಗುತ್ತದೆ. ಆದುದರಿಂದ ವ್ಯಾಕರಣಾದಿಯಾದ ಭಾಷಾಂಶಗಳನ್ನು ಕಲಿಯಲೇಬೇಕು.
         ಈ ಪ್ರಕಾರದ ಕಲಿಕೆಗೆ ಅನೇಕ ಪುಸ್ತಕಗಳು ಈಗಾಗಲೇ ಹೊರಬಂದು ಸಹಸ್ರಾರು ಓದುಗರನ್ನು ತಲುಪಿವೆ. ಅಂತಹ ಪುಸ್ತಕಗಳ ಸಾಲಿಗೆ ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬ ಡಿ.ವಿ.ಜಿಯವರ ಮಾತಿನಂತೆ ಪ್ರಸ್ತುತ ಸಿದ್ಧವಾದ ‘ಸಿರಿಗನ್ನಡ ಭಾಷಾಂಶ ಸಂಚಿ’ ಎಂಬ ಶೀರ್ಷಿಕೆಯ ಪುಸ್ತಕ ಕಿರಿಯ ಕಲಿಕಾರ್ಥಿಗಳಿಂದ ಹಿಡಿದು ಹಿರಿಯ ಓದುಗರನ್ನು ಆಕರ್ಷಿಸುತ್ತದೆ ಎಂಬ ಆಶಯ ನನ್ನದು. ಪ್ರಾಥಮಿಕ ಶಾಲೆಯ ಪಠ್ಯಕ್ರಮದಿಂದ ಪದವಿ ಪಠ್ಯಕ್ರಮಗಳಲ್ಲಿ ಅಡಕವಾಗಿರುವ ಭಾಷಾಂಶಗಳ ಉದಾಹರಣೆಗಳನ್ನು, ಪರಿಕಲ್ಪನೆಗಳನ್ನು ಹಿಡಿದಿಟ್ಟ ಈ ಹೊತ್ತಿಗೆಯು ಅನೇಕ ಹುದ್ದೆಗಳ ಆಕಾಂಕ್ಷೆಯೊಂದಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಬಹು ಸರಳವಾಗಿ ಅರ್ಥವಾಗುವಂತಹ ಹಿನ್ನಲೆಯಲ್ಲಿ ಸಿದ್ಧಗೊಂಡಿದೆ. 

Read More...
Paperback
Paperback 370

Inclusive of all taxes

Delivery

Item is available at

Enter pincode for exact delivery dates

Also Available On

ಡಾ. ರವಿ ಹೆಚ್

ಡಾ. ರವಿ ಹೆಚ್. ಸಹಾಯಕ ಪ್ರಧ್ಯಾಪಕರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಶಿಕಾರಿಪುರ. ಇವರು   ೧೭-೦೮-೨೦೦೯ ರಿಂದ ೨೮-೧೨-೨೦೧೦ರ ವರೆಗೆ ಜುಬೇದಾ ಮಹಿಳಾ ಡಿ.ಇಡಿ ಕಾಲೇಜು, ಶಿಕಾರಿಪುರದಲ್ಲಿ ಪ್ರಾಚಾರ್ಯರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿ ನಂತರ ೨೯-೧೨-೨೦೧೦ರಿಂದ ಕರ್ನಾಟಕದ ಪ್ರತಿಷ್ಟಿತ ಬಿ.ಇಡಿ ಕಾಲೇಜುಗಳಲ್ಲಿ ಒಂದಾದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಾ ಬೋಧನೆಯೊಂದಿಗೆ ವಿವಿಧ ಶೈಕ್ಷಣಿಕ ಸಮ್ಮೇಳನ, ಕಾರ್ಯಾಗಾರಗಳಲ್ಲಿ ಭಾಗವಿಸುತ್ತಾ, ಹಲವಾರು ಸಂಶೋಧನಾ ಮತ್ತು ಸೈದ್ದಾಂತಿಕ ಲೇಖನಗಳನ್ನು ಮಂಡಿಸಿದ್ದಲ್ಲದೇ ಅನೇಕ ಲೇಖನಗಳನ್ನು ಪ್ರತಿಷ್ಟಿತ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ ಹೊಂದಿದ ಇವರು ಸೃಜನಾತ್ಮಕವಾಗಿ ಏನಾದರೂ ಕಾರ್ಯನಿರ್ವಹಿಸಬೇಕೆಂದು ಆಲೋಚಿಸಿ ತಮ್ಮ ಮೊದಲ ಪ್ರಯತ್ನದ ಫಲವಾಗಿ ಕರ್ನಾಟಕದ ಉನ್ನತ ಪ್ರಶಸ್ತಿಯಾದ ಪಂಪ ಪ್ರಶಸ್ತಿಯನ್ನು ಪಡೆದ ಸಾಹಿತಿಗಳ ಕುರಿತು 'ಪಂಪ ಪ್ರಶಸ್ತಿ ಪುರಸ್ಕೃತರು' ಎಂಬ ಪುಸ್ತಕವನ್ನು ಪ್ರಕಟಿಸಿದ್ದಲ್ಲದೇ ಈಗ ಕಿರಿಯರಿಂದ ಹಿರಿಯರಿಗಾಗಿ ಸರಳವಾಗಿ ಅರ್ಥವಾಗುವಂತೆ ವ್ಯಾಕರಣಕ್ಕೆ ಪೂರಕವಾಗಿ ಪುಸ್ತಕವನ್ನು ಬರೆಯುವ ಪ್ರಯತ್ನ ಮಾಡಿದ್ದಾರೆ.

Read More...

Achievements

+5 more
View All