Share this book with your friends

The Population Myth / ಜನಸಂಖ್ಯೆ ಮಿಥ್ಯಾ Islam, Family planning and politics in India / ಇಸ್ಲಾಂ, ಕುಟುಂಬ ಯೋಜನೆ ಮತ್ತು ಭಾರತದಲ್ಲಿ ರಾಜಕೀಯ

Author Name: S. Y. QURAISH | Format: Paperback | Genre : Educational & Professional | Other Details

ಜನಸಂಖ್ಯೆಯ ದತ್ತಾಂಶಕ್ಕೆ "ಮುಸ್ಲಿಂ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ" ದ ಬಗ್ಗೆ, ಹೇಗೆ ಬಲಪಂಥೀಯು ಪ್ರಚಾರಗಳನ್ನು ಹುಟ್ಟುಹಾಕಿದೆ ಎಂಬುದನ್ನು ಜನಸಂಖ್ಯಾ ಮಿಥ್ಯಾ ಪುಸ್ತಕವು ಬಹಿರಂಗಪಡಿಸುತ್ತದೆ. ಇದು ಸಾಮಾನ್ಯವಾಗಿ ಜನಸಂಖ್ಯಾ ಬೆಳೆವಣಿಗೆಗೆ ಸಂಬಂಧಿಸಿದಂತೆ ಬಹುಸಂಖ್ಯಾತರ ಭಯ ಮತ್ತು ಆತಂಕವನ್ನು ಉಂಟುಮಾಡಲು ಬಳಸಲಾಗುತ್ತದೆ. ಪುಸ್ತಕದ ಲೇಖಕರಾದ ಶ್ರೀ. ಎಸ್. ವೈ. ಖುರೈಶಿ, ರವರು ಈ ಮಿಥ್ಯೆಯನ್ನು ಅಳಿಸಲು ಅಂಕಿ ಅಂಶಗಳು ಮತ್ತು ಸಂಗತಿಗಳ ಮೂಲಕ, ಯೋಜಿತ ಜನಸಂಖ್ಯಾ ನಿಯಂತ್ರಣವು ಎಲ್ಲಾ ಸಮುದಾಯಗಳ ಹಿತಾಸಕ್ತಿಯಲ್ಲಿ ಹೇಗೆ ಇರುವುದೆಂಬುದನ್ನು ತೋರ್ಪಡಿಸಿದ್ದಾರೆ.

ಇಸ್ಲಾಂ ಧರ್ಮವು, ಸಣ್ಣ ಕುಟುಂಬಗಳನ್ನು ವಾಸ್ತವಾಗಿ ಸಮರ್ಥಿಸುವ ವಿಶ್ವದ ಮೊದಲ ಧರ್ಮ ಎಂಬುದನ್ನು ತೋರಿಸಲು ಈ ಪುಸ್ತಕವು ಇಸ್ಲಾಂನ ಪವಿತ್ರ ಕುರಾನ್ ಮತ್ತು ಹದೀಸ್ ಗ್ರಂಥಗಳನ್ನು ಪರಿಶೀಲಿಸುತ್ತದೆ. ಆದ್ದರಿಂದಲೇ ಇಂದು ಹಲವಾರು ಇಸ್ಲಾಮಿಕ್ ರಾಷ್ಟ್ರಗಳು ಜನಸಂಖ್ಯೆಯ ನೀತಿಗಳನ್ನು ಹೊಂದಿವೆ. ಮುಸ್ಲಿಂರು ಧಾರ್ಮಿಕ ಆಧಾರದ ಮೇಲೆ ಕುಟುಂಬ ಯೋಜನೆಯನ್ನು ದೂರವಿಡುತ್ತಾರೆ ಎಂಬ ಇತರೇ ತಪ್ಪು ಕಲ್ಪನೆಯನ್ನೂ ಸಹ ಇದು ತೆಗೆದು ಹಾಕುತ್ತದೆ. ಯಾವುದೇ ಕುಂದಿಗೂ ಎಡೆ ಕೊಡದೆ ನಡಿಸಿದ ಸಂಶೋಧನೆಯ ಆಧಾರದ ಮೇಲೆ, ಈ ಪುಸ್ತಕವು ಇಂದು ಭಾರತದಲ್ಲಿ ಜನಸಂಖ್ಯಾ ಶಾಸ್ತ್ರದ ರಾಜಕೀಯೀಕರಣದ ಬಗ್ಗೆ ವಿಶ್ವಾಸಾರ್ಹ ಧ್ವನಿಯ ಪ್ರಮುಖ ಪುಸ್ತಕವಾಗಿದೆ. 

"ಜನಸಂಖ್ಯೆ ಬೆಳವಣಿಗೆಯ ಆಯಾಮಗಳು ಮತ್ತು ಫಲವತ್ತತೆ, ಅಭಿವೃದ್ಧಿಗಳು, ಆಯ್ಕೆಗಳು ಮತ್ತು ರಾಜಕೀಯದ ನಡುವಿನ ಸಂಕೀರ್ಣವಾದ ಪರಸ್ಪರ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ" ಈ ಪುಸ್ತಕವನ್ನು ಓದಬೇಕು. 

ಸುಜಾತಾ ರಾವ್, ಮಾಜಿ ಆರೋಗ್ಯ ಕಾರ್ಯದರ್ಶಿ, ಭಾರತ ಸರ್ಕಾರ

ಸಾರ್ವಜನಿಕ ಆರೋಗ್ಯ ಆಡಳಿತ, ಆರೋಗ್ಯ ನೀತಿ ಮತ್ತು ಪ್ರಜಾಪ್ರಭುತ್ವದ ಭಾರತದ ಭವಿಷ್ಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಈ ಪುಸ್ತಕವೊಂದು ಪ್ರಮುಖ ಓದುವಿಕೆಯಾಗಿದೆ. 

ಕೇಶವ ದೇಸಿರಾಜು, ಮಾಜಿ ಆರೋಗ್ಯ ಕಾರ್ಯದರ್ಶಿ, ಭಾರತ ಸರ್ಕಾರ, ಪ್ರಸ್ತುತ ಅಧಕ್ಷರು, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾ

"ಕುಟುಂಬ ಯೋಜನೆಯ ಬಗ್ಗೆ ಮುಸ್ಲಿಂರ ಚಿಂತನೆ ಮತ್ತು ಅಭ್ಯಾಸ ಕುರಿತು ಲಭ್ಯವಿರುವ ಸಾಹಿತ್ಯಕ್ಕೆ ಹೊಸ ಸೇರ್ಪಡೆ”

ತಾಹಿರ್ ಮಹಮೂದ್, ಮಾಜಿ ಅಧ್ಯಕ್ಷರು, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ, ಭಾರತ ಸರ್ಕಾರ

Read More...
Paperback
Paperback 499

Inclusive of all taxes

Delivery

Item is available at

Enter pincode for exact delivery dates

Also Available On

ಎಸ್. ವೈ. ಖುರೈಶ

ಎಸ್. ವೈ. ಖುರೈಶಿ 1971 ರಲ್ಲಿ ಭಾರತೀಯ ಆಡಳಿತ ಸೇವೆಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ದೇಶದ ಹದಿನೇಳನೇ ಮುಖ್ಯ ಚುನಾವಣಾ ಆಯುಕ್ತರಾದರು. ಅವರು ಚುನಾವಣಾ ವ್ಯವಸ್ಥೆಯಲ್ಲಿ ಹಲವಾರು ಸುಧಾರಣೆಗಳನ್ನು ಪರಿಚಿಯಿಸಿದರು ಉದಾಹರಣೆಗೆ, ಮತರದಾರರಿಗೆ ಶಿಕ್ಷಣ ನೀಡಲು ವಿಭಾಗವನ್ನು ರಚಿಸುವುದು, ವೆಚ್ಚವನ್ನು ಮೇಲ್ವಿಚಾರಣೆ ಮಾಡುವ ವಿಭಾಗವನ್ನು ರಚಿಸುವುದು  ಮತ್ತು ಇಂಡಿಯಾ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಷನ್ ಮ್ಯಾನೇಜ್‌ಮೆಂಟ್, ರಾಷ್ಟ್ರೀಯ ಮತದಾರರ ದಿನಾಚರಣೆಗೆ ಚಾಲನೆ ಸೇರಿದಂತೆ ವಿವಿಧ ಚುನಾವಣಾ ಬದಲಾವಣೆಗಳನ್ನು ಜಾರಿಗೆ ತಂದರು. ಅಕ್ಟೋಬರ್ 2017 ರಲ್ಲಿ ಪ್ರಜಾಪ್ರಭುತ್ವದ ರಾಯಭಾರಿಗಳಾಗಿ ಸೇವೆ ಸಲ್ಲಿಸಲು ಇಂಟರ್‌ನ್ಯಾಶನಲ್ IDEA (ಇನ್‌ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಟೋರಲ್ ಅಸಿಸ್ಟೆನ್ಸ್), ಸ್ಟಾಕ್‌ಹೋಮ್‌ನಿಂದ ಕೋಫಿ ಅನ್ನನ್ ರವರ ಜೊತೆಗೆ, ಎಸ್. ವೈ. ಖುರೈಶಿರವರನ್ನೂ ಆಯ್ಕೆ ಮಾಡಲಾಗಿತ್ತು. ಎಸ್. ವೈ. ಖುರೈಶಿ ರವರು “ಆನ್ ಡಾಕ್ಯುಮೆಂಟೆಡ್ ವಂಡರ್: ದಿ ಮೇಕಿಂಗ್ ಆಫ್ ದಿ ಗ್ರೇಟ್ ಇಂಡಿಯನ್ ಎಲೆಕ್ಷನ್ (2014)” ಎಂಬ ಕೃತಿಗಳ ಲೇಖಕರೂ ಸಹ ಮತ್ತು ಅವರು ದಿ ಗ್ರೇಟ್ ಮಾರ್ಚ್ ಆಫ್ ಡೆಮಾಕ್ರಸಿ: ಸೆವೆನ್ ಡಿಕೇಡ್ಸ್ ಆಫ್ ಇಂಡಿಯಾಸ್ ಎಲೆಕ್ಷನ್ಸ್ (2019) ಅನ್ನು ಕೂಡ ಸಂಪಾದಿಸಿದ್ದಾರೆ.

Read More...

Achievements

+12 more
View All